ಅತ್ಯುತ್ತಮ ಅನುಕರಣೀಯ ಸಾಧನೆ ಹಾಗೂ ಉತ್ಪಾದನೆ ಮಟ್ಟವನ್ನು ಸಮೃದ್ಧಗೊಳಿಸಿಕೊಂಡ ತಂಬಾಕು ಬೆಳೆಗಾರರಿಗೆ 21ನೇ ಟಿಐಐ ಟೊಬ್ಯಾಕೊ ಫಾರ್ಮರ್ಸ್ ಅವಾಡ್ರ್ಸ್‍ನಲ್ಲಿ ಸನ್ಮಾನ

  • ಅತ್ಯುತ್ತಮ ಕೃಷಿದಕ್ಷತೆಯನ್ನು ತೋರಿದ ಕರ್ನಾಟಕದ 10 ತಂಬಾಕು ಬೆಳೆಗಾರರಿಗೆ ಸನ್ಮಾನ
  • ರಾಜಕೀಯ ಮುಖಂಡರು, ತಂಬಾಕು ಉದ್ಯಮದವರು, ರೈತರು ಮತ್ತು ಮಾಧ್ಯಮದವರು ಕಾರ್ಯಕ್ರಮದಲ್ಲಿ ಭಾಗಿ
  • ತಂಬಾಕು ಮತ್ತು ತಂಬಾಕು ಉತ್ಪನ್ನಗಳು ವಾರ್ಷಿಕವಾಗಿ 6,500 ಕೋಟಿ ರೂಪಾಯಿ ವಿದೇಶಿ ವಿನಿಯಮವನ್ನು ಸಾಧಿಸುತ್ತಿವೆ
  • ಭಾರತೀಯ ತಂಬಾಕು ಉದ್ಯಮ ದೇಶದ ಆರ್ಥಿಕತೆಗೆ 12 ಲಕ್ಷ ಕೋಟಿಯ ಕೊಡುಗೆ ನೀಡುತ್ತಿದೆ
  • ಸರ್ಕಾರ ತಂಬಾಕಿನ ರಫ್ತಿಗೆ ಪ್ರೋತ್ಸಾಹವನ್ನು ವಿಸ್ತರಿಸಬೇಕು
  • ಭಾರತೀಯ ಕಾನೂನುಬದ್ಧ ಸಿಗರೇಟ್ ಮಾರುಕಟ್ಟೆಯಲ್ಲಿ ಕಾನೂನು ಬಾಹಿರವಾಗಿ 1/3 ಭಾಗದಷ್ಟು ಅಕ್ರಮ ಸಿಗರೇಟ್ ಇದೆ
  • ಅಕ್ರಮ ಸಿಗರೇಟ್ ವ್ಯಾಪಾರ ಹೆಚ್ಚಾಗುತ್ತಿರುವುದರಿಂದ ಕಾನೂನುಬದ್ಧ ಉದ್ಯಮ, ಸರ್ಕಾರದ ಆದಾಯ ಮತ್ತು ಸಿಗರೇಟ್ ತಂಬಾಕು ಬೆಳೆಗಾರರಿಗೆ ಹಲವು ರೀತಿಯಲ್ಲಿ ದುಷ್ಪರಿಣಾಮವಾಗುತ್ತಿವೆ

ಮೈಸೂರು, 28ನೇ ಏಪ್ರಿಲ್ 2022: ದ ಟೊಬ್ಯಾಕೊ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ (ಟಿಐಐ) ಇಂದು 21ನೇ ಆವೃತ್ತಿಯ ಟೊಬ್ಯಾಕೊ ಫಾರ್ಮರ್ಸ್ ಅವಾಡ್ರ್ಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಮಕಾಲೀನ ಕೃಷಿ ಪದ್ಧತಿಯಿಂದ ಅತ್ಯುತ್ತಮವಾದದ್ದನ್ನು ಸಾಧಿಸಿದ, ಉತ್ತಮ ದಕ್ಷತೆಯಿಂದ ಇಳುವರಿ ಮಟ್ಟವನ್ನು ಸಮೃದ್ಧಗೊಳಿಸಿಕೊಂಡ ರೈತರಿಗೆ ಈ ಸಂದರ್ಭದಲ್ಲಿ ಗುರಿತಿಸಿ ಸನ್ಮಾನಿಸಲಾಯಿತು.

ಗೌರವಾನ್ವಿತ ಸಂಸದ ಶ್ರೀ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಶ್ರೀ ಎ.ಎಚ್. ವಿಶ್ವನಾಥ್, ಶಾಸಕರಾದ ಶ್ರೀ ಎಚ್.ಪಿ. ಮಂಜುನಾಥ್, ಶ್ರೀ ಸಾ.ರಾ. ಮಹೇಶ್, ಶ್ರೀ ಎ.ಟಿ. ರಾಮಸ್ವಾಮಿ, ಶ್ರೀ ಕೆ. ಮಹದೇವ, ಶ್ರೀ ಅನಿಲ್‍ಕುಮಾರ್ ಚಿಕ್ಕಮಾಧು; ತಂಬಾಕು ಮಂಡಳಿ ಅಧ್ಯಕ್ಷರಾದ ಶ್ರೀ ವೈ. ರಘುನಾಧ ಬಾಬು, ತಂಬಾಕು ಮಂಡಳಿಯ ನಿರ್ದೇಶಕರಾದ (ಆಕ್ಷನ್) ಶ್ರೀಮತಿ ಎಂ. ಅಶ್ವಿನಿ ನಾಯ್ಡು, ಸಿಟಿಆರ್‍ಐ ನಿರ್ದೇಶಕರಾದ ಡಾ. ಡಿ. ದಾಮೋದರ್ ರೆಡ್ಡಿ ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಜರಿದ್ದರು.

ಕರ್ನಾಟಕದ 10 ರೈತರು ಎರಡು ಪ್ರತ್ಯೇಕ ವಿಭಾಗಗಳಲ್ಲಿ- ಅತ್ಯುತ್ತಮ ರೈತ  ಮತ್ತು ‘ಗುರುತಿಸುವಿಕೆ’ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದರು. ಪ್ರಶಸ್ತಿ ವಿಜೇತರು:

ಸಂಖ್ಯೆ ರೈತರ ಹೆಸರು ಹಳ್ಳಿ ಪ್ರಶಸ್ತಿ ವರ್ಗ
1 ಚನ್ನಬಸಪ್ಪ ಮೊಥಾ ಅತ್ಯುತ್ತಮ ರೈತ
2 ದೇವ ನಾಯಿಕ ಗೌಡಗೆರೆ ಗುರುತಿಸುವಿಕೆ
3 ಕುಚೇಲೇಗೌಡ ಸೀರೇನಹಳ್ಳಿ ಅತ್ಯುತ್ತಮ ರೈತ
4 ಎಂ.ಎನ್. ರಾಮಚಂದ್ರ ಎಂ.ಪಿ. ಕೊಪ್ಪಳ್ ಗುರುತಿಸುವಿಕೆ
5 ಎಚ್.ಎಂ. ಪರಮೇಶ ಹದ್ಲಾಪುರ ಅತ್ಯುತ್ತಮ ರೈತ
6 ರಘು ಕೊಥವಳ್ಳಿ ಕೊಪ್ಪಳ್ ಅತ್ಯುತ್ತಮ ರೈತ
7 ಅಸ್ಲಾಂ ಪಾಷಾ ಹಲಗನಹಳ್ಳಿ ಗುರುತಿಸುವಿಕೆ
8 ಸುರೇಶ್ ಕೆ.ಟಿ ಕೊಟ್ಟೆಗಾಲ ಅತ್ಯುತ್ತಮ ರೈತ
9 ಎಸ್.ವಿ. ಯೋಗಣ್ಣ ಸೀಬಳ್ಳಿ ಅತ್ಯುತ್ತಮ ರೈತ
10 ರಾಮಕೃಷ್ಣ ಲಕ್ಕಿಕುಪ್ಪೆ ಗುರುತಿಸುವಿಕೆ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಟಿಐಐ ನಿರ್ದೇಶಕ ಶ್ರೀ ಶಾರದ್ ತಂಡನ್, ‘ಈ ಪ್ರಶಸ್ತಿಗಳ ಮೂಲಕ ಟಿಐಐಗೆ ಸಹಕಾರ ನೀಡುತ್ತಿರುವ ತಂಬಾಕು ಬೆಳೆಗಾರರನ್ನು ಗುರುತಿಸುವುದು ಮತ್ತು ದೇಶದ ಸಾಮಾಜಿಕ-ಆರ್ಥಿಕತೆ ಅವರ ಕೊಡುಗೆಯನ್ನು ಪ್ರಶಂಸಿಸಲಾಗುತ್ತಿದೆ’ ಎಂದರು.

‘ಭಾರತದಲ್ಲಿ ತಂಬಾಕು ಅತ್ಯಂತ ಪರಮುಖ ವಾಣಿಜ್ಯ ಬೆಳೆಯಾಗಿದೆ. ಕೃಷಿ ಉದ್ಯೋಗ, ಕೃಷಿ ಆದಾಯ, ಆದಾಯ ಗುರುತಿಸುವಿಕೆ ಮತ್ತು ವಿದೇಶಿ ವಿನಿಯಮ ಗಳಿಕೆಯಂತರ ಕ್ಷೇತ್ರದಲ್ಲಿ ಕೊಡುಗೆ ನೀಡುವ ಮೂಲಕ ಸಾಮಾಜಿಕ-ಆರ್ಥಿಕತೆ, ಅಗಾಧ ಕೊಡುಗೆ ನೀಡುತ್ತಿದೆ. ತಂಬಾಕು ಉತ್ಪಾದನೆ ಮತ್ತು ರಫ್ತು ನಾಯಕತ್ವದಲ್ಲಿ ವಿಶ್ವದಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು, ತಂಬಾಕು ಎಲೆ ಮತ್ತು ತಂಬಾಕು ಉತ್ಪನ್ನಗಳ ರಫ್ತಿನಿಂದ ವಾರ್ಷಿಕವಾಗಿ 6,500 ಕೋಟಿ ವಿದೇಶ ವಿನಿಯಮವನ್ನು ಗಳಿಸಲಾಗುತ್ತಿದೆ’ ಎಂದರು.

ಭಾರತದಲ್ಲಿ ತಂಬಾಕು ಉದ್ಯಮ ಆರ್ಥಿಕತೆಗೆ ಅತ್ಯಂದ ದೊಡ್ಡ ಕೊಡುಗೆ ನೀಡುತ್ತಿದ್ದು, ಅಸೊಸ್ಯಾಮ್ (ಂSSಔಅಊಂಒ) ಅಧ್ಯಯನದ ಪ್ರಕಾರ ಸುಮಾರು 12 ಲಕ್ಷ ಕೋಟಿ ರೂಪಾಯಿ ಕೊಡುಗೆ ನೀಡುತ್ತಿದೆ.

ಭಾರತದಲ್ಲಿ ‘ಗೋಲ್ಡನ್ ಲೀಫ್’ 4.6 ಕೋಟಿ ಜನರ ಜೀವನೋಪಾಯಕ್ಕೆ ಆಧಾರವಾಗಿದ್ದು, ಇದರಲ್ಲಿ ರೈತರು, ರೈತ ಕಾರ್ಮಿಕರು, ಬೀಡಿ ಕಾರ್ಮಿಕರು, ತೆಂಡು ಎಲೆ ಬಿಡಿಸುವವರು, ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು ಇತ್ಯಾದಿ ಇದ್ದಾರೆ. ಇದು ಅತ್ಯಂತ ಉದ್ಯೋಗಿಪರ ಮತ್ತು ಲಾಭದಾಯಕ ಬೆಳೆಯಾಗಿ, ಈ ವಲಯದಲ್ಲಿ ಇತರೆ ಬೆಳೆಗಳಿಗಿಂದ ಅತ್ಯಂತ ಹೆಚ್ಚಿನ ಆದಾಯವನ್ನು ತರುತ್ತಿದೆ. ಕೇಂದ್ರ ತಂಬಾಕು ಸಂಶೋಧನಾ ಇನ್‍ಸ್ಟಿಟ್ಯೂಟ್ (ಸಿಟಿಆರ್‍ಐ) ನಡೆಸಿದ ಅಧ್ಯಯನ ಕೂಡ ಈ ವಲಯಗದಲ್ಲಿ ಎಫ್‍ಸಿವಿ ತಂಬಾಕಿಗಿಂತ ಬೇರೆ ಯಾವುದೇ ಬೆಳೆ ಇಷ್ಟೊಂದು ಲಾಭದಾಯಕವಲ್ಲ ಎಂಬುದನ್ನು ಪ್ರಮಾಣೀಕರಿಸಿದೆ.

ಎಫ್‍ಸಿವಿ, ಭಾರತದಲ್ಲಿ ಉತ್ಪಾದಿಸಲಾಗುವ ಪ್ರಮುಖ ರಫ್ತು ತಂಬಾಕು. ಅರ್ಧಕ್ಕಿಂತ ಹೆಚ್ಚನ್ನು ರಫ್ತು ಮಾಡಲಾಗುತ್ತಿದ್ದು, ಉಳಿದದ್ದನ್ನು ದೇಶೀಯ ಸಿಗರೇಟ್ ಉತ್ಪಾದನೆಯಲ್ಲಿ ಬಳಸಲಾಗುತ್ತಿದೆ. ಕಾನೂನುಬದ್ಧ ಸಿಗರೇಟ್ ಮಾದರಿಯಲ್ಲಿ ತಂಬಾಕು ಬಳಕೆ ಸಣ್ಣ ಪ್ರಮಾಣದಲ್ಲಿ (8%) ಕುಸಿತವಾಗಿರುವುದರಿಂದ, ಸಿಗರೇಟ್ ಅಲ್ಲದ ತಂಬಾಕು ಉತ್ಪನ್ನಗಳು ಭಾರತದಲ್ಲಿ ಉತ್ಪಾದನೆಯಲ್ಲಿ ಪ್ರಾಬಲ್ಯ ಹೊಂದಿವೆ. ಹೀಗಿದ್ದರೂ, ಎಫ್‍ಸಿವಿ ತಂಬಾಕು ರಫ್ತುದಾರರು ವಾರ್ಷಿಕವಾಗಿ 3,000 ಕೋಟಿ ವಿದೇಶಿ ವಿನಿಯಮವನ್ನು ಗಳಿಸುತ್ತಿದ್ದಾರೆ.

‘ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ತಂಬಾಕಿನ ಸ್ಪರ್ಧೆಯನ್ನು ಹೆಚ್ಚಿಸಲು ಮತ್ತು ರಫ್ತನ್ನು ಉತ್ತೇಜಿಸಲು ಸರ್ಕಾರ ತಂಬಾಕಿನ ರಫ್ತಿಗೆ ಪ್ರೋತ್ಸಾಹನ್ನು ಇನ್ನಷ್ಟು ಹೆಚ್ಚಿಸಬೇಕಿದೆ. ಈ ಮೂಲಕ ಭಾರತೀಯ ಕೃಷಿ-ರಫ್ತನ್ನು ಉತ್ತೇಜಿಸಬೇಕಾಗಿದೆ’ ಎಂದು ಶ್ರೀ ತಂಡನ್ ಹೇಳಿದರು.

ಭಾರತದ ಪ್ರಮುಖ ರಫ್ತು ಉತ್ಪನ್ನವಾಗುವ ಸಾಮಥ್ರ್ಯವನ್ನು ತಂಬಾಕು ಹೊಂದಿದ್ದು, ಇದಕ್ಕಾಗಿ ಅನುಕೂಲಕರ ನಿಯಮಗಳು ಮತ್ತು ರಫ್ತು ನೀತಿಗಳನ್ನು ಈ ಬೆಳೆಗೆ ಒದಗಿಸಬೇಕಿದೆ. ಭಾರತದಲ್ಲಿ ಕಾನೂನುಬದ್ಧ ಸಿಗರೇಟ್ ಉದ್ಯಮವು ಕಳೆದ ದಶಕದಲ್ಲಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದು, ಸಿಗರೇಟ್ ಕ್ಷೇತ್ರದಲ್ಲಿ ಅತ್ಯಂತ ಕುಸಿತವನ್ನು ಕಂಡಿದೆ. ಅತ್ಯಂತ ಹೆಚ್ಚು ತೆರಿಗೆ, ತೀವ್ರತರವಾದ ತಂಬಾಕು ನಿಯಮಗಳು ಮತ್ತು ಕೋವಿಡ್ ಸಾಂಕ್ರಾಮಿಕದಿಂದ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ.

ತೀವ್ರತರವಾದ ನಿಯಮಗಳು ಮತ್ತು ಅಧಿಕ ತೆರಿಗೆಗಳು ಪ್ರತಿಕೂಲ ಪರಿಣಾಮಗಳನ್ನು ಬೀರಿವೆ. ಇವುಗಳಿಂದ ತಂಬಾಕು ಬೇಡಿಕೆ ಕುಸಿದಿರುವುದೊಂದೇ ಅಲ್ಲ, ಕಾನೂನುಬದ್ಧವಾಗಿ ತೆರಿಗೆ ಪಾವತಿಸಿ, ನಿಯಮಗಳನ್ನು ಅನುಸರಿಸಿ ಉತ್ಪಾದಿಸುವ ಉತ್ಪನ್ನಗಳಿಗಿಂತ, ಕಡಿಮೆ ಬೆಲೆ, ತೆರಿಗೆ ನೀಡದ, ಕಾನೂನುಬಾಹಿರ ಉತ್ಪನ್ನಗಳತ್ತ ಮಾರುಕಟ್ಟೆ ಬದಲಾಗುತ್ತದೆ.

ಯುಎಸ್‍ಎ, ಜಿಂಬಾಬ್ವೆ ಮತ್ತು ಮಾಲಾವಿಯಂತಹ ತಂಬಾಕು ಉತ್ಪಾದನೆ ದೇಶಗಳಿಗಿಂತ ವಿಶ್ವದಲ್ಲಿ ಭಾರತದಲ್ಲಿರುವ ಪ್ರಸ್ತುತ ತಂಬಾಕು ನಿಯಂತ್ರಣ ಕಾನೂನು ಅತ್ಯಂತ ಕಠಿಣವಾಗಿದೆ. ವಿಶ್ವದಲ್ಲಿ ತಂಬಾಕು/ ಸಿಗರೇಟ್ ಬಳಕೆಯಲ್ಲಿ ಅಗ್ರಸ್ಥಾನಗಳಲ್ಲಿರುವ ಹಾಗೂ ಜಾಗತಿಕ ಬಳಕೆಯಲ್ಲಿ ಶೇ.50ರಷ್ಟು ಪಾಲು ಹೊಂದಿರುವ ಯುಎಸ್‍ಎ, ಚೀನಾ ಮತ್ತು ಜಪಾನ್‍ಗಳಿಗಿಂತ ಭಾರತದಲ್ಲಿ ತಂಬಾಕು ನಿಯಂತ್ರಣ ಕ್ರಮಗಳು ಅತ್ಯಂತ ಕಠಿಣವಾಗಿವೆ. ಉದಾಹರಣೆಗೆ, ಭಾರತದಲ್ಲಿ 85%ರಷ್ಟು ಚಿತ್ರಾತ್ಮಕ ಎಚ್ಚರಿಕೆಗಳಿದ್ದು, ಎಚ್ಚರಿಕೆಯ ಗಾತ್ರದಲ್ಲಿ ವಿಶ್ವದಲ್ಲಿ ಇದು ಎಂಟನೇ ರ್ಯಾಂಕ್‍ನಲ್ಲಿದೆ. ಜಾಗತಿಕವಾಗಿ ಎಚ್ಚರಿಕೆ ಸರಾಸರಿ ಗಾತ್ರ 45% ಆಗಿದೆ.

ಕಾನೂನುಬದ್ಧ ಸಿಗರೇಟ್‍ಗಳು ಎಲ್ಲ ನಿಯಮಗಳಿಗೆ ಬದ್ಧವಾಗಿದ್ದರೆ, ಅಕ್ರಮ ಸಿಗರೇಟ್‍ಗಳು ಕಡ್ಡಾಯವಾದ ಚಿತ್ರಾತ್ಮಕ ಎಚ್ಚರಿಕೆಯಂತಹ ಯಾವುದೇ ನಿಯಮಗಳನ್ನು ಪಾಲಿಸುವುದಿಲ್ಲ. ವಾಸ್ತವವಾಗಿ, ಕಳ್ಳಸಾಗಣೆ ಮಾಡಲಾದ ಅಂತಾರಾಷ್ಟ್ರೀಯ ಬ್ರ್ಯಾಂಡ್‍ಗಳ ಸಿಗರೇಟ್ ಪ್ಯಾಕ್‍ಗಳ ಮೇಲೆ ಚಿತ್ರಾತ್ಮಕ ಎಚ್ಚರಿಕೆಗಳು ಇಲ್ಲದಿರುವುದರಿಂದ ಈ ಸಿಗರೇಟ್‍ಗಳು ಕಾನೂನುಬದ್ಧ ಸಿಗರೇಟ್‍ಗಳಿಗಿಂತ ಸುರಕ್ಷಿತ ಎಂಬ ಅನಿಸಿಕೆಯನ್ನು ಗ್ರಾಹಕರಿಗೆ ನೀಡುತ್ತಿವೆ. ಅಕ್ರಮ ಉತ್ಪಾದಕರು ಗ್ರಾಹಕರ ಅನಿಸಿಕೆಯನ್ನು ಬಳಸಿಕೊಂಡು, ಭಾರತೀಯ ಮಾರುಕಟ್ಟೆಯಲ್ಲಿ ಚಿತ್ರಾತ್ಮಕ ಎಚ್ಚರಿಕೆಗಳು ಇಲ್ಲದ ಆಕರ್ಷಕ ಪ್ಯಾಕ್‍ಗಳ ಮೂಲಕ ಸಿಗರೇಟ್‍ಗಳನ್ನು ನೀಡುತ್ತಿದ್ದಾರೆ.

ಸಿಗರೇಟ್ ಮೇಲೆ ಅತ್ಯಧಿಕ ತೆರಿಗೆ ಒಂದು ಹೊರೆ. ಆದರೆ, ತೆರಿಗೆ ವಂಚಿಸುವವರಿಗೆ ಇದು ಪ್ರೇರಣೆಯಾಗಿದೆ. ಇದು ಬೃಹತ್ ಪ್ರಮಾಣದಲ್ಲಿ ಕಳ್ಳಸಾಗಾಣಿಕೆಯನ್ನು ಉತ್ತೇಜಿಸುತ್ತಿದೆ.

ಹೀಗಾದರೆ, ಭಾರತ ವಿಶ್ವದಲ್ಲಿ ಅಕ್ರಮ ಸಿಗರೇಟ್ ಮಾರುಕಟ್ಟೆಯಲ್ಲಿ 4ನೇ ಸ್ಥಾನಕ್ಕೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದರಿಂದ ಸರ್ಕಾರಕ್ಕೆ 15,000 ಕೋಟಿ ರೂಪಾಯಿಗೂ ಹೆಚ್ಚು ಆದಾಯ ವಾರ್ಷಿಕವಾಗಿ ನಷ್ಟವಾಗಲಿದೆ. ಅಕ್ರಮ ಸಿಗರೇಟ್ ಇದೀಗ ಭಾರತೀಯ ಕಾನೂನುಬದ್ಧ ಸಿಗರೇಟ್ ಮಾರುಕಟ್ಟೆಯಲ್ಲಿ 1/3 ರಷ್ಟಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಈ ನಿಷಿದ್ಧ ಅಕ್ರಮ ವ್ಯಾಪಾರದಿಂದ ಕಾನೂನುಬದ್ಧ ಉದ್ಯಮ, ಸರ್ಕಾರದ ಆದಾಯ ಮತ್ತು ತಂಬಾಕು ಬೆಳೆಯುವ ದೇಶದ ರೈತರ ಆದಾಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಸ್ಥಳೀಯವಾಗಿ ಬೆಳೆಯುವ ತಂಬಾಕನ್ನು ತಮ್ಮ ಉತ್ಪನ್ನಗಳಲ್ಲಿ ಬಳಸದ ಅಕ್ರಮ ಸಿಗರೇಟ್ ವ್ಯಾಪಾರ ಹೆಚ್ಚಾಗುತ್ತಿರುವುದರಿಂದ ಭಾರತೀಯ ಎಫ್‍ಸಿವಿ ತಂಬಾಕು ಬೆಳೆಗಾರರ ಮೇಲೆ ಅತ್ಯಂತ ಹೆಚ್ಚಿನ ಪರಿಣಾಮ ಬೀರಲಿದೆ. 2013-14ರಲ್ಲಿ 316 ದಶಲಕ್ಷ ಕೆ.ಜಿಗಳ ಸಾಮಾನ್ಯ ಬೆಳೆಯಿಂದ ಕಳೆದ 5 ವರ್ಷಗಳಲ್ಲಿ ಬೆಳೆ ಕುಸಿತವಾಗಿ, ಪ್ರತಿ ವರ್ಷ 218 ದಶಲಕ್ಷ ಕೆ.ಜಿಗಳಿಗೆ ಇಳಿದಿದೆ. ಎಫ್‍ಸಿವಿ ತಂಬಾಕು ಉತ್ಪಾದನೆಯಲ್ಲಿ ಅತ್ಯಂತ ಕುಸಿತ ಕಂಡಿರುವುದರಿಂದ, ದೇಶದ ತಂಬಾಕು ಬೆಳೆಯುತವ ಪ್ರದೇಶಗಳ ರೈತರು ಮತ್ತು ಕಾರ್ಮಿಕರ ಜೀವನೋಪಾಯಕ್ಕೆ ಸಂಕಷ್ಟ ಎದುರಾಗಿದೆ. ದೇಶದಲ್ಲಿ ಎಫ್‍ಸಿವಿ ತಂಬಾಕು ಬೆಳೆ ಕುಸಿತದಿಂದ 35 ದಶಲಕ್ಷ ಮಾನವ ಉದ್ಯೋಗ ದಿನಗಳು ನಷ್ಟವಾಗಿವೆ ಎಂದು ಅಂದಾಜಿಸಲಾಗಿದೆ. ಇದು ರೈತರ ಆದಾಯವನ್ನು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಕುಗ್ಗಿಸಿದೆ.